Sunday, September 19, 2010

ಸ್ವಾಮಿ ವಿವೇಕಾನಂದ

ತನುವಿನ ಕೊಳೆಯ ತೊಳೆದೆ ನಾ
ಮನದ ಕೊಳೆಯ ತೊಳೆಯಲಿಲ್ಲ
ತನು ಬೆಳಗಿತು ,ಮನ ಕುಂದಿತು
ತನು ಹೊಳೆಯಿತು ,ಮನ ಮಂದವಾಯಿತು.

ಜನ ತನುವ ನೋಡಿದರು
ಬಹಳ ಕೊಂಡಾಡಿದರು
ತನುವಿನ ಸೌಂದರ್ಯವನೇ
ಹಾಡಿ ಹೊಗಳಿದರು.

ಜನತೆಗೆ ಮನ ಕಾಣಲಿಲ್ಲ
ಅದರ ಕುಸಿತ ತೋರಲಿಲ್ಲ
ನನ್ನ ತನುವಿನ ಹೊಳಪು
ಮನವನ್ನೇ ಮರೆಮಾಚಿತ್ತು.

ನನ್ನ ಗುರು ಬಂದ
ಸಿಡಿಲ ಕಿಡಿಯ ಸಂದೇಶ ತಂದ
ವಿವೇಕಾನಂದ ನನ್ನೆದುರುನಿಂತ
ನನ್ನ ಮನವ ದಿಟ್ಟಿಸಿದ
ಅದರ ತಮವ ಅಟ್ಟಿಸಿದ
ಭಕ್ತಿಯ ಬೀಜ ಬಿತ್ತಿದ
ಜ್ಞಾನದ ದೀಪ ಹಚ್ಚಿದ
ನಾನಿರುವೆ ಹೆದರದಿರೆಂದ

ಮನ ಬೆಳಗಿತು ,ಕಳೆ ಕಿತ್ತಿತು
ತನುವಂತೆ ಮನವೂ ಬೆಳಗಿತು.